ಕಳೆದ ಭಾನುವಾರ ನಿಗೂಢವಾಗಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನರಗಲು ಗ್ರಾಮದ ಮೋಹನ್ ನಾಪತ್ತೆಯಾಗಿದ್ದ. ಈತನ ಕುಟುಂಬಸ್ಥರು ಕಿಡ್ನಾಪ್ ಕೇಸ್ ದಾಖಲು ಮಾಡಲು ಬಂದ್ರೆ ಬಿಂಡಗನವಿಲೆ ಪೊಲೀಸರು ಮಿಸ್ಸಿಂಗ್ ಕಂಪ್ಲೇಂಟ್ ಎಂದು ದೂರು ಪಡೆದಿದ್ದರು. ಆದರೆ, ಕಳೆದ 5ದಿನಗಳ ಹಿಂದೆ ಮೋಹನ್ ಕೊಲೆಯಾಗ್ತಾನೆ. ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡ್ತಿದ್ದ ಮೋಹನ್‍ನನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿಸಿದ್ದು ಆತನ ದೊಡ್ಡಪ್ಪನ ಮಗ ಕುಮಾರ್, ಮತ್ತು ನರಗಲು ಗ್ರಾಮದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ರಾಜು ಎಂದು ಶಂಕಿಸಲಾಗಿದೆ. ಈ ಬಗ್ಗೆ ದೂರು ನೀಡಲು ಹೋದ ಮೋಹನ್ ಕುಟುಂಬಸ್ಥರಿಂದ ಕೊಲೆ ಆರೋಪ ಬದಲು ಮಿಸ್ಸಿಂಗ್ ಕೇಸ್ ದಾಖಲಿಸಿಕೊಳ್ತಾರೆ. ಬಳಿಕ ಎಸ್‍ಪಿ ಯತೀಶ್ ಪ್ರಕರಣವನ್ನುಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸಿ, ಮೋಹನ್ ದೊಡ್ಡಪ್ಪನ ಮಗ ಕುಮಾರ್, ತೇಜಸ್‍ನನ್ನು ವಿಚಾರಣೆ ನಡೆಸಿದ್ರು. ಈ ವೇಳೆ ಕಿಡ್ನಾಪ್ ಮಾಡಿ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಗ್ರಾಮದ ಅರಣ್ಯ ಪ್ರದೇಶದಲ್ಲಿ ಹೂತು ಹಾಕಿರುವುದಾಗಿ ಹೇಳಿದ್ದಾರೆ. ಬಳಿ ಪೊಲೀಸರು ಹೂತಿದ್ದ ಶವವನ್ನು ಮೇಲೆತ್ತಿದ್ದಾಗ ಅದು ಮೋಹನ ಶವ ಎಂದು ಖಚಿತವಾಗುತ್ತೆ. ಇದೀಗ ಮೋಹನ್ ಕುಟುಂಬಸ್ಥರು ಬಿಂಡಿಗನವಿಲೆ ಪಿಎಸ್‍ಐ ಶ್ರೀಧರ್ ವಿರುದ್ಧ 2 ಲಕ್ಷ ರೂಪಾಯಿ ಲಂಚ ಪಡೆದು ನಾವು ಕೊಟ್ಟ ಕಿಡ್ನಾಪ್ ಕೇಸ್ ದಾಖಲಿಸಿಕೊಳ್ಳಲಿಲ್ಲ.. ಅವತ್ತೇ ದೂರು ಪಡೆದಿದ್ದರೆ ಮೋಹನ್ ಸಾಯುತ್ತಿರಲಿಲ್ಲ ಎಂದಿದ್ದಾರೆ.
#NewsCafe #PublicTV #Mandya